Labour card : ಲೇಬರ್ ಕಾರ್ಡ್ ಹೊಂದಿದವರಿಗೆ ಬಂಪರ್ ಆಫರ್..! ತಿಂಗಳಿಗೆ 3000 ಪಿಂಚಣಿ ಹಣ ಸಿಗುತ್ತೆ.
ಸ್ನೇಹಿತರೆ ರಾಜ್ಯದಲ್ಲಿನ ಕಟ್ಟಡ ಹಾಗೂ ಇತರ ನಿರ್ಮಾಣ ವಲಯದ ಕಾರ್ಮಿಕರಿಗೆ ಕರ್ನಾಟಕ ರಾಜ್ಯ ಸರ್ಕಾರದಿಂದ ಮಹತ್ವದ ಸಹಾಯ ಪ್ರಸನ್ನ ಮಾಡಲಾಗಿದೆ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿಯ ಮುಖಾಂತರ ಕಾರ್ಮಿಕರ ವೃದ್ಯಾಪ್ ಆರೋಗ್ಯ ಮತ್ತು ಕುಟುಂಬದ ಭದ್ರತೆಗೆ ಸಂಬಂಧಿಸಿದ ಹಲವಾರು ಆರ್ಥಿಕ ಯೋಜನೆಗಳನ್ನು ಜಾರಿಗೆ ತರಲಾಗಿದೆ. ಈ ಯೋಜನೆಗಳ ಉದ್ದೇಶ ಕಾರ್ಮಿಕರಿಗೆ ಸ್ಥಿರ ಜೀವನ ಮತ್ತು ಭವಿಷ್ಯದ ಭದ್ರತೆ ಒದಗಿಸಿ ಕೊಡಲಾಗುವುದು.
ಸ್ನೇಹಿತರೆ ನೀವೇನಾದರೂ ಕಟ್ಟಡ ಕಾರ್ಮಿಕರಾಗಿದ್ದು ಇನ್ನೂ ಕಲ್ಯಾಣ ಮಂಡಳಿಯಲ್ಲಿ ನೊಂದಾಯಿಸುವುದಿಲ್ಲದಿದ್ದರೆ ಈ ಕೂಡಲೇ ತಡ ಮಾಡದೆ ನೋಂದಣಿ ಮಾಡಿಕೊಂಡು ಸರ್ಕಾರದ ಈ ಸೌಲಭ್ಯಗಳನ್ನು ಪಡೆದುಕೊಳ್ಳಬಹುದು. ಇದರ ಇನ್ನಿತರ ಮಾಹಿತಿಗಾಗಿ ಈ ಲೇಖನವನ್ನು ಕೊನೆಯವರೆಗೂ ನೋಡಿ.
ಮಾಸಿಕ ಪಿಂಚಣಿ ಯೋಜನೆ.
ಈ ಯೋಜನೆಗೆ ಯಾರು ಅರ್ಹರು .
60 ವರ್ಷ ವಯಸ್ಸು ಪೂರ್ಣಗೊಳಿಸಿದ ನೊಂದಾಯಿತ ಕಟ್ಟಡ ಕಾರ್ಮಿಕರಿಗೆ ಇದು ಸಿಗುತ್ತದೆ.
ಪಿಂಚಣಿಯ ಮೊತ್ತ.
ಸ್ನೇಹಿತರೆ ಈ ಯೋಜನೆಯ ಮುಖಾಂತರ ಪ್ರತಿ ತಿಂಗಳು 3000 ಹಣ ನೇರವಾಗಿ ಬ್ಯಾಂಕ್ ಖಾತೆಗೆ ಜಮಾ ಆಗುತ್ತದೆ.
ಅಂಗವಿಕಲ ಕಾರ್ಮಿಕರಿಗೆ.
ಕೆಲಸದ ಸಮಯದಲ್ಲಿ ಅಪಘಾತದಿಂದ ಅಂಗವಿಕಲಾದರೆ ತಿಂಗಳಿಗೆ 2000 ಹಣ ಪಿಂಚಣಿ ಮತ್ತು ಗರಿಷ್ಠ 2 ಲಕ್ಷದವರೆಗೆ ಪರಿಹಾರ ಸಹಾಯಧನ ನೀಡಲಾಗುತ್ತದೆ.
ಕುಟುಂಬಕ್ಕೆ ಆರ್ಥಿಕ ಭದ್ರತೆ.
ಕಾರ್ಮಿಕರು ಅಕಾಲಿಕವಾಗಿ ನಿಧನರಾದಲ್ಲಿ ಅವರು ಕುಟುಂಬವನ್ನು ಸರ್ಕಾರ ನೋಡಿಕೊಳ್ಳುತ್ತದೆ.
ಅತಿ ಅಥವಾ ಪತ್ನಿಯು ತಿಂಗಳಿಗೆ 1,500 ಕುಟುಂಬ ಪಿಂಚಣಿ ನೀಡಲಾಗುತ್ತದೆ.
ಅಂತ್ಯಕ್ರಿಯ ವೆಚ್ಚಕ್ಕೆ 4000 ತಕ್ಷಣದ ನೆರವು.
ಅನುಗ್ರಹ ಮೊತ್ತದಿಂದ ಗರಿಷ್ಠ 71,000 ವರೆಗೆ ಸಹಾಯ ಮಾಡಲಾಗುತ್ತದೆ.
ಇತರೆ ಪ್ರಮುಖ ಸರ್ಕಾರಿ ಸೌಲಭ್ಯಗಳು.
ತಾಯಿ ಲಕ್ಷ್ಮಿ ಯೋಜನೆ ಮಹಿಳಾ ಕಟ್ಟಡ ಕಾರ್ಮಿಕರಿಗೆ ಹೆರಿಗೆಯ ಸಮಯದಲ್ಲಿ 50,000 ಹಣಕಾಸಿನ ನೆರವು ನೀಡಲಾಗುತ್ತದೆ.
ಕಲಿಕೆ ಭಾಗ್ಯ ಸ್ಕಾಲರ್ಶಿಪ್
ಕಾರ್ಮಿಕರ ಮಕ್ಕಳಿಗೆ ವಿದ್ಯಾಭ್ಯಾಸಕ್ಕಾಗಿ ವರ್ಷಕ್ಕೆ 30000 ವರೆಗೆ ವಿದ್ಯಾರ್ಥಿ ವೇತನವಾಗಿ ನೀಡಲಾಗುತ್ತದೆ.
ಟೋಲ್ ಕಿಟ್ ನೆರವು.
ಕೆಲಸಕ್ಕೆ ಅಗತ್ಯವಿರುವ ಉಪಕರಣಗಳನ್ನು ಖರೀದಿ ಮಾಡಲು 20 ಸಾವಿರ ಆರ್ಥಿಕ ಸಹಾಯ ನೀಡಲಾಗುತ್ತದೆ.
ನೊಂದಣಿ ಮಾಡಿಕೊಳ್ಳುವ ವಿಧಾನ.
- ಅಧಿಕೃತ ವೆಬ್ ಸೈಟಿಗೆ ಭೇಟಿ ನೀಡಿ.karbwwb.karnataka.gov.in
- New construction worker registration ಎಂಬ ಆಯ್ಕೆ ಮೇಲೆ ಕ್ಲಿಕ್ ಮಾಡಿ.
- ಸರಿಯಾದ ದಾಖಲೆಗಳನ್ನು ಅಪ್ಲೋಡ್ ಮಾಡಿ.( ಆಧಾರ್ ಕಾರ್ಡ್, ಪಾಸ್ ಪೋರ್ಟ್ ಅಳತೆಗೆ ಭಾವಚಿತ್ರ, ಬ್ಯಾಂಕ್ ಪಾಸ್ ಬುಕ್, )
- ಓ ಟಿ ಪಿ ದೃಡೀಕರಣ ( ಆಧಾರ್ ಲಿಂಕ್ ಆಗಿರುವ ಮೊಬೈಲ್ ಸಂಖ್ಯೆಗೆ ಬರುವ ಓಟಿಪಿ ಮೂಲಕ ನೊಂದಣಿ ಮಾಡಿಕೊಳ್ಳಿ).
ಮುಖ್ಯ ಸೂಚನೆ
ಒಮ್ಮೆ ನೊಂದಣಿ ಮಾಡಿದ ನಂತರ ಎಲ್ಲಾ ಸೌಲಭ್ಯಗಳನ್ನು ಪಡೆಯಲು ಅರ್ಹರಾಗುತ್ತಿರಿ. ಆದ್ದರಿಂದ ಅರ್ಹ ಕಾರ್ಮಿಕರು ಈ ಅವಕಾಶವನ್ನು ತಪ್ಪಿಸಿಕೊಳ್ಳಬೇಡಿ ಎಂದು ತಿಳಿಸುತ್ತೇನೆ.