Ration card correction : ರೇಷನ್ ಕಾರ್ಡ್ ತಿದ್ದುಪಡಿ ಮಾಡಿಕೊಳ್ಳಲು ಮತ್ತೆ ಅವಕಾಶ..! ಇಲ್ಲಿದೆ ಕಂಪ್ಲೀಟ್ ಮಾಹಿತಿ.

Ration card correction :- ನಮಸ್ಕಾರ ಸ್ನೇಹಿತರೆ ಕರ್ನಾಟಕದ ಜನತೆಗೆ ಈ ಲೇಖನದ ಮೂಲಕ ತಿಳಿಸಲು ಬಯಸುವ ವಿಷಯವೆಂದರೆ, ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಅಧಿಕೃತ ಮೂಲಕ ರೇಷನ್ ಕಾರ್ಡ್ ತಿದ್ದುಪಡಿಗಾಡಿಗೆ ಅರ್ಜಿಗಳನ್ನು ಇವಾಗ ಆನ್ಲೈನ್ ಅಲ್ಲಿ ಸ್ವೀಕರಿಸಲಾಗುತ್ತಿದೆ. ತಮ್ಮ ಅತ್ಯತ್ವದಲ್ಲಿರುವ ಎಪಿಎಲ್ ಅಥವಾ ಬಿಪಿಎಲ್ ಪಡಿತರ ಚೀಟಿಗಳಲ್ಲಿ ಬದಲಾವಣೆ ಅಥವಾ ತಿದ್ದುಪಡಿಗಳನ್ನು ಮಾಡಲು ಬಹಳ ಸಮಯದಿಂದ ಕಾಯುತ್ತಿರುವ ನಾಗರಿಕರಿಗೆ ಈಗ ತಮ್ಮ ಅರ್ಜಿಗಳನ್ನು ಆನ್ಲೈನ್ನಲ್ಲಿ ಸಲ್ಲಿಸಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಈ ಲೇಖನ ಕೊನೆಯವರೆಗೂ ನೋಡಿ

 

WhatsApp Group Join Now
Telegram Group Join Now       

ಸ್ನೇಹಿತರೆ ಈ ಲೇಖನದಲ್ಲಿ ಅಗತ್ಯ ದಾಖಲೆಗಳು, ಆನ್ಲೈನ್ ಅರ್ಜಿ ಪ್ರಕ್ರಿಯ, ಮತ್ತು ಕರ್ನಾಟಕದಲ್ಲಿ ರೇಷನ್ ಕಾರ್ಡ್ ತಿದ್ದುಪಡಿಗೆ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಇವೆಲ್ಲವೂ ಸೇರಿದಂತೆ ನೀವು ತಿಳಿದುಕೊಳ್ಳಬೇಕಾದ ಎಲ್ಲಾ ಮಾಹಿತಿ ಈ ಲೇಖನದಲ್ಲಿ ನೀಡಲಾಗಿದೆ.

 

(Ration card correction) ರೇಷನ್ ಕಾರ್ಡ್ ಅಲ್ಲಿ ಬದಲಾವಣೆಗಳನ್ನು ಮಾಡಬಹುದಾದ ಅಂಶಗಳು

  • ಹೆಸರು ಬದಲಾವಣೆ (ಆಧಾರ್ ಕಾರ್ಡ್ ಪ್ರಕಾರ)
  • ಕುಟುಂಬದ ಸದಸ್ಯರ ಅಳಿಸುವಿಕೆ
  • ಕುಟುಂಬದ ಸದಸ್ಯರ ಸೇರ್ಪಡೆ
  • ವಿಳಾಸ ಬದಲಾವಣೆ
  • ಒಂದು ಜಿಲ್ಲೆಯಿಂದ ಇನ್ನೊಂದು ಜಿಲ್ಲೆಗೆ ರೇಷನ್ ಕಾರ್ಡ್ ವರ್ಗಾವಣೆ ಮಾಡಿಕೊಳ್ಳುವುದು
  • ನ್ಯಾಯಬೆಲೆ ಅಂಗಡಿ ಬಲಾವಣೆ.

 

(Ration card correction) ರೇಷನ್ ಕಾರ್ಡ್ ತಿದ್ದುಪಡಿಗೆ ಅಗತ್ಯವಿರುವ ದಾಖಲೆಗಳು.

ಹೆಸರು ಬದಲಾವಣೆ :- ಆಧಾರ್ ಕಾರ್ಡ್.

ಕುಟುಂಬದ ಸದಸ್ಯರ ಸೇರ್ಪಡೆ :- ಕುಟುಂಬದ ಸದಸ್ಯರ ಆಧಾರ್ ಕಾರ್ಡ್, ಜಾತಿ ಮತ್ತು ಆದಾಯ ಪ್ರಮಾಣ ಪತ್ರ, ಜನನ ಪ್ರಮಾಣ ಪತ್ರ ( ಆರು ವರ್ಷದ ಒಳಗಿನ ಮಕ್ಕಳಿಗೆ ಮಾತ್ರ )

ಕುಟುಂಬದ ಸದಸ್ಯರ ಅಳಿಸುವಿಕೆ ( delet) :- ಪುರಾವೆಯೊಂದಿಗೆ ಅಳಿಸುವಿಕೆಗೆ ಕಾರಣ ( ಉದಾಹರಣೆಗಾಗಿ ಮದುವೆ ಪ್ರಮಾಣ ಪತ್ರ ಅಥವಾ ಮದುವೆಯ ಆಹ್ವಾನ ಪತ್ರ ಅಥವಾ ಮರಣ ಹೊಂದಿರುವ ಮರಣ ಪ್ರಮಾಣ ಪತ್ರ ನೀಡಬೇಕಾಗುತ್ತದೆ )

ವಿಳಾಸ ಬದಲಾವಣೆ :- ನವೀಕರಿಸಿದ ವೇಳಾಸದೊಂದಿಗೆ ಯಾವುದೇ ಒಬ್ಬ ಸದಸ್ಯರ ಆಧಾರ್ ಕಾರ್ಡ್

ಪಡಿತರ ಚೀಟಿ ವರ್ಗಾವಣೆ :- ನವೀಕರಿಸಿದ ವಿಳಾಸದೊಂದಿಗೆ ಯಾವುದೇ ಒಬ್ಬ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ನೀಡಬೇಕು.

WhatsApp Group Join Now
Telegram Group Join Now       

ನ್ಯಾಯಬೆಲೆ ಅಂಗಡಿ ಬದಲಾವಣೆ :- ನವೀಕರಿಸಿದ ವಿಳಾಸದೊಂದಿಗೆ ಯಾವುದೇ ಒಬ್ಬ ಕುಟುಂಬದ ಸದಸ್ಯರ ಆಧಾರ್ ಕಾರ್ಡ್ ನೀಡಬೇಕು.

 

(Ration card correction) ರೇಷನ್ ಕಾರ್ಡ್ ತಿದ್ದುಪಡಿಗಳನ್ನು ಮಾಡುವುದು ಹೇಗೆ ?

 

ಸ್ನೇಹಿತರೆ ಪಡಿತರ ಚೀಟಿಯಲ್ಲಿ ಮೇಲೆ ತಿಳಿದಿರುವ ತಿದ್ದುಪಡಿಗಳನ್ನು ಮಾಡಲು ಹಂತಗಳನ್ನು ಪೂರೈಸಬೇಕು.

ಪಡಿತರ ಚೀಟಿ ತಿದ್ದುಪಡಿಗಾಗಿ ಅರ್ಜಿ ಸಲ್ಲಿಸಲು ಮೇಲೆ ತಿಳಿಸಿರುವ ಅಗತ್ಯ ದಾಖಲೆಗಳನ್ನು ನಿಮ್ಮ ಹತ್ತಿರದ ಕರ್ನಾಟಕ ಒನ್, ಗ್ರಾಮ್ ಒನ್, ಅಥವಾ ಬೆಂಗಳೂರು ಒನ್, ಕೇಂದ್ರಗಳಿಗೆ ಭೇಟಿ ನೀಡಿ.

ತಿದ್ದುಪಡಿಗಳು ಪೂರ್ಣಗೊಂಡ ನಂತರ ಸ್ವಿಕೃತಿಯನ್ನು ರಚಿಸಲಾಗುತ್ತದೆ ತದನಂತರದಲ್ಲಿ ಪ್ರಿಂಟ್ ಔಟ್ ತೆಗೆದುಕೊಂಡು ನಿಮ್ಮ ತಾಲೂಕು ಆಹಾರ ಇಲಾಖೆ ಕಚೇರಿಗೆ ಸಲ್ಲಿಸಬೇಕು.

ಈ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ಪಡಿತರ ಚೀಟಿ ತಿದ್ದುಪಡಿಗಾಗಿ ನಿಮ್ಮ ಅರ್ಜಿಯ ಸ್ಥಿತಿಯನ್ನು ನಿಯಮಿತವಾಗಿ ಪರಿಶೀಲನೆ ಮಾಡಿ.

ಅರ್ಜಿಯನ್ನು ಆಹಾರ ಇಲಾಖೆ ಅನುಮೋದಿಸಿದ ನಂತರವೇ ನಿಮ್ಮ ಅರ್ಜಿ ತಾಲೂಕು ಆಹಾರ ಇಲಾಖೆ ಕಚೇರಿಯಿಂದ ರೇಷನ್ ಕಾರ್ಡ್ ಮುದ್ರಿತ ಪ್ರತಿಯನ್ನು ಪಡೆಯಬಹುದಾಗಿದೆ. ಅಥವಾ ಕೆಳಗೆ ನೀಡಿರುವ ಲಿಂಕ್ ಅನ್ನು ಬಳಸಿಕೊಂಡು ಡಿಜಿ ಲಾಕರ್ ಮೂಲಕ ಡೌನ್ಲೋಡ್ ಮಾಡಿಕೊಳ್ಳಬಹುದಾಗಿದೆ.

 

ರೇಷನ್ ಕಾರ್ಡ್ ತಿದ್ದುಪಡಿ ಅರ್ಜಿ ಸ್ಥಿತಿ ತಿಳಿಯಲು ಇದರ ಮೇಲೆ ಒತ್ತಿ…

ಈ ಲಿಂಕ್ ನ ಮೇಲೆ ಕ್ಲಿಕ್ ಮಾಡುವ ಮುಖಾಂತರ ನಿಮ್ಮ ರೇಷನ್ ಕಾರ್ಡ್ ತಿದ್ದುಪಡಿಯ ಅತಿಥಿಯನ್ನು ತಿಳಿದುಕೊಳ್ಳಬಹುದು.

 

ಸ್ನೇಹಿತರೆ ಈ ಲೇಖನ ನಿಮಗೆ ಇಷ್ಟವಾಗಿದೆ ಎಂದು ಭಾವಿಸುತ್ತೇನೆ… ಇದೇ ರೀತಿಯ ಇನ್ನಷ್ಟು ಹೆಚ್ಚಿನ ರೇಷನ್ ಕಾರ್ಡ್ ಮಾಹಿತಿಗಳಿಗಾಗಿ ನಮ್ಮ WHATSAPP ಮತ್ತು TELEGRAM ಗ್ರೂಪ್ಗಳಿಗೆ ಜಾಯಿನ್ ಆಗಿ ದಿನನಿತ್ಯದ ಅಪ್ಡೇಟ್ಸ್ ಗಳನ್ನು ಪಡೆದುಕೊಳ್ಳಿ….!

 

Leave a Comment

?>