PMFME SCHEME : ಹೊಸ ಆಹಾರ ಸಂಸ್ಕರಣೆ ಉದ್ದಮೆ ಪ್ರಾರಂಭ ಮಾಡಲು ಯಂತ್ರಗಳನ್ನು ಖರೀದಿ ಮಾಡಲು ಸರ್ಕಾರ ಸಬ್ಸಿಡಿ ಹಣ ನೀಡುತ್ತಿದೆ..! ಕೊಡಲೇ ಅರ್ಜಿ ಸಲ್ಲಿಸಿ.

PMFME SCHEME : ಹೊಸ ಆಹಾರ ಸಂಸ್ಕರಣೆ ಉದ್ದಮೆ ಪ್ರಾರಂಭ ಮಾಡಲು ಯಂತ್ರಗಳನ್ನು ಖರೀದಿ ಮಾಡಲು ಸರ್ಕಾರ ಸಬ್ಸಿಡಿ ಹಣ ನೀಡುತ್ತಿದೆ..! ಕೊಡಲೇ ಅರ್ಜಿ ಸಲ್ಲಿಸಿ.

ಇದು ಕೇಂದ್ರ ಹಾಗೂ ರಾಜ್ಯ ಸರ್ಕಾರ ಪ್ರಾಯೋಜಿತ ಜಂಟಿ ಸಬ್ಸಿಡಿ ಯೋಜನೆ ಆಗಿದೆ. ನೀವು ಯಾವುದೇ ರೀತಿಯ ಆಹಾರ ಸಂಸ್ಕರಣೆ ಮತ್ತು ಉತ್ಪಾದನೆ  ಘಟಕ ಆರಂಭ ಮಾಡಲು ಬಯಸಿದರೆ ಅದಕ್ಕೆ ಉಪಯೋಗಿಸುವ ಎಲ್ಲ ರೀತಿಯ ಯಂತ್ರೋಪಕರಣಗಳಿಗೆ ಸಬ್ಸಿಡಿ ಸಿಗುತ್ತದೆ.

WhatsApp Group Join Now
Telegram Group Join Now       

ನೀವು ಯಾವ ಯಾವ ಮಷೀನ್ ತಗೋಬೇಕು ಅಂತ ಕೋಟೆಶನ್ ಕೊಟ್ಟಿರುತ್ತಿರೋ, ಕೋಟೆಶನ್ ಕೊಟ್ಟ ಕಂಪನಿ ಅವರಿಗೆ ಬ್ಯಾಂಕ್ ನಿಂದ ಹಣ ಹೋಗುತ್ತದೆ, ನಿಮ್ಮ ಖಾತೆಗೆ ಹಣ ಬರುವದಿಲ್ಲ. ನಿಮಗೆ ಮಷೀನ್ಸ್ ಬರುತ್ತವೆ.

 

ಸಬ್ಸಿಡಿ ಬಗ್ಗೆ

ಉಧಾಹರಣೆಗೆ ನೀವು ಒಂದು oil ಮಿಲ್ ಆರಂಭ ಮಾಡಲು ಇಚ್ಚಿಸಿದರೆ ನಿಮಗೆ ಒಂದು oil ಮಿಲ್ ಮಷೀನ್ ಹಾಗೂ oil ಫಿಲ್ಟರ್ ಮಷೀನ್ ಬೇಕಾಗುತ್ತದೆ,  oil filter ಬೇಕಾದ್ರೆ ತಗೋಬಹುದು ಇಲ್ಲವಾದ್ರೆ ಬಿಡಬಹುದು,   ಈಗ ಈ ಎರಡು ಮಷೀನ್ ಸೇರಿ ಅಂದಾಜು 3 ಲಕ್ಷ ಆಯ್ತು ಅಂದ್ರೆ 3 ಲಕ್ಷದ ಕೋಟೆಶನ್ ಕೊಡಬೇಕು.

ಬ್ಯಾಂಕ್ ನವ್ರು ಸ್ಯಾಂಕ್ಷನ್ ಲೆಟರ್ ಕೊಟ್ಟ ಮೇಲೆ ನೀವು ಯೋಜನಾ ವರದಿ ಪ್ರಕಾರ ಒಟ್ಟು ಘಟಕ ವೆಚ್ಚದ ಶೇಕಡಾ 10% ರಷ್ಟುನ್ನು ವಂತಿಕೆ ಕಟ್ಟಬೇಕು.  ಅಂದರೆ 3 ಲಕ್ಷದ 10% ಅಂದರೆ  30000  ಮೂವತ್ತು ಸಾವಿರ ಬ್ಯಾಂಕ್ ಗೆ ಕಟ್ಟಬೇಕು.

 

ಆಗ ಬ್ಯಾಂಕ್ 270000 rs ರಷ್ಟು ಸಾಲವಾಗಿ ಸ್ಯಾಂಕ್ಷನ್ ಮಾಡುತ್ತದೆ.

ಬ್ಯಾಂಕ್ ನ 270000 rs ಮತ್ತು ನಿಮ್ಮ 30000 rs ಸೇರಿಸಿ  ಮಷೀನ್ ಕೊಡುವ ಕಂಪನಿಗೆ ಹಣ ಹಾಕುಲಾಗುತ್ತೆ, ನೀವು ಮಷೀನ್ supply ಮಾಡುವವರಿಂದ ಮಷೀನ್ ಪಡೆಯುತ್ತಿರಿ.

ಬ್ಯಾಂಕ್ ಸ್ಯಾಂಕ್ಷನ್ ಮಾಡಿದ ಹಣಕ್ಕೆ 50% ಸಬ್ಸಿಡಿ ಸಿಗುತ್ತದೆ. ಅಂದ್ರೆ oil ಮಿಲ್ ಗೆ ಬ್ಯಾಂಕ್ 270000 rs ಹಣ ಸ್ಯಾಂಕ್ಷನ್ ಮಾಡಿತ್ತು,  270000 rs ಅರ್ಧ ಹಣ ಅಂದರೆ 135000 rs ಸಬ್ಸಿಡಿ ಆಗುತ್ತದೆ.

ಉಳಿದ 135000 rs ಹಣ ನಿಮ್ಮ ಮೇಲೆ ಸಾಲವಾಗಿ ಉಳಿಯುತ್ತದೆ,  ಈ 135000 rs ಕ್ಕೆ ಅಂದಾಜು ಶೇಕಡಾ 9%  ರಿಂದ 11% ರಷ್ಟು ಬಡ್ಡಿ ಹಾಕಲಾಗುತ್ತೆ. 3 ವರ್ಷದ ಅಥವಾ 5 ವರ್ಷದ ಕಂತುಗಳ ಮುಖಾಂತರ ಪ್ರತಿ ತಿಂಗಳು EMIs ಕಟ್ಟಬೇಕು.

WhatsApp Group Join Now
Telegram Group Join Now       

 

ಈ ಯೋಜನೆಗೆ ಅರ್ಜಿ ಸಲ್ಲಿಸಲು ಅರ್ಹತೆಗಳು –

1) ನಿಮ್ಮ CIBIL ಸ್ಕೋರ್ / Credit History  ಚನ್ನಾಗಿರಬೇಕು. Above 650+

2) ನೀವು ಈಗಾಗಲೇ ಬ್ಯಾಂಕ್ ಅಥವಾ ಫೈನಾನ್ಸ್ ನಲ್ಲಿ ಸಾಲ ಪಡೆದು ಸಾಲವನ್ನು ಮರುಪಾವತಿ ಮಾಡದೇ ಇದ್ದರೆ, ಕಟ್ ಬಾಕಿ, NPA, OTS ಆಗಿದ್ದರೆ ನೀವು ಈ ಯೋಜನೆಗೆ ಅರ್ಹರು ಅಲ್ಲ.

 ಆದ್ರೆ ಇಂತಹ ಸಂದರ್ಭದಲ್ಲಿ ನೀವು ನಿಮ್ಮ ಕುಟುಂಬದಲ್ಲಿ ಬೇರೆ ಯಾರಾದ್ರೂ ಹೆಸರಿನಲ್ಲಿ ಅರ್ಜಿ ಸಲ್ಲಿಸಬಹುದು, ಆದ್ರೆ ಅವರು CIBIL ಹಾಗೂ credit score  ಚನ್ನಾಗಿರಬೇಕು,   ಹಾಗೂ ಅವರು ಈ ಮೊದಲು ಎಲ್ಲಿಯೂ ಸಾಲ ಪಡೆಯದೇ ಇದ್ದರು ಈ ಯೋಜನೆ ಗೆ ಅರ್ಜಿ ಸಲ್ಲಿಸಬಹುದು

3) ಸರ್ಕಾರಿ, ಅರೆ ಸರ್ಕಾರಿ ನೌಕರರು ಈ ಯೋಜನೆಗೆ ಅರ್ಹರು ಅಲ್ಲ. ಆದ್ರೆ ಅವರ ಕುಟುಂಬಸ್ಥರು ಅರ್ಜಿ ಸಲ್ಲಿಸಬಹುದು.

4) ನೀವು ಆರಂಭ ಮಾಡಲು ಇಚ್ಚಿಸಿದ ಉದ್ಯಮದ ಬಗ್ಗೆ ಕನಿಷ್ಠ ಮಟ್ಟದ ಮಾಹಿತಿ ಆದರೂ ಇರಬೇಕು.

 

ಅರ್ಜಿ ಸಲ್ಲಿಸಲು ಮತ್ತು ಇತರೆ ಖರ್ಚುಗಳು

1) ಈ ಯೋಜನೆಗೆ ಅರ್ಜಿ ಸಲ್ಲಿಸಲು ಯಾವುದೇ ರೀತಿಯ ಫೀಜ್ ಇಲ್ಲ. ಸಂಪೂರ್ಣ ಉಚಿತವಾಗಿದೆ.

2) ಆದ್ರೆ FOOD LICENSE, electricity,  ಗೆ ಸರ್ಕಾರಿ ಫೀಜ್ ಇರುತ್ತದೆ,

3) ಅರ್ಜಿ ಸಲ್ಲಿಸಲು ನಿಮ್ಮ ಜಿಲ್ಲೆಯ   PMFME ಜಿಲ್ಲಾ ಸಂಪನ್ಮೂಲ ವ್ಯಕ್ತಿಗಳನ್ನು ಸಂಪರ್ಕಿಸಿ ಅಥವಾ ನಿಮ್ಮ ಜಿಲ್ಲೆಯ ಜಿಲ್ಲಾ ಕೃಷಿ ನಿರ್ದೇಶಕರ ಕಚೇರಿಗೆ ಭೇಟಿ ನೀಡಿ

ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿ 

ಜಿಲ್ಲಾ ಸಂಪನ್ಮೂಲ ವ್ಯಕ್ತಿ  ( DRP )

ಧಾರವಾಡ ಹಾಗೂ ಗದಗ ಜಿಲ್ಲೆಗಳು

9071230731 / 9071353139

Leave a Comment

?>